Quotes

Kannada Whatsapp Good Morning | Good Night Messages

Kannada Kavanagalu

Kannada Quotes

Kannada Love Feeling Quotes

Kannada Good Morning

Good night Messages Wishes

| ಶುಭೋಧಯ | ಶುಭ ದಿನ |   *ಶುಭ ಮುಂಜಾನೆ*

*ಅಗತ್ಯ ಇದ್ದಾಗ ಬರುವವರನ್ನು ಎಂದು ನಂಬಬೇಡ.*
*ಬೇಕಾದಾಗ ಬರುವವರ ಹಿಂದೆ ಎಂದು ಹೋಗಬೇಡ.*
*ಬೇಡ ಅಂತ ಹೋದವರನ್ನು ನೆನಪಿಸಿ ಕೊರಗಬೇಡ.*
*ನಿನ್ನ ನಂಬಿ ಬಂದವರನ್ನ ಕೊನೆವರೆಗೂ ಕೈ ಬಿಡಬೇಡ.*
ಇಂದು ಎಲ್ಲರಿಗೂ ಬೇಕಾದವರೂ ನಾಳೆ ಯಾರಿಗೂ ಬೇಡವಾಗುತ್ತಾರೆ.
ಇಂದು ಮತ್ತು ನಾಳೆಯ ಆ ಚಿಕ್ಕ ಅಂತರದಲ್ಲೇ ಎಷ್ಟೊಂದು ಬದಲಾವಣೆ.
ಪಲ್ಲಟಗಳಿಗೆ ಸಮಯದ ಅಗತ್ಯವಿಲ್ಲ.
 
 *ನುಡಿಮುತ್ತು*
*ಯಾರೇ ಆಗಲಿ  ಎಲ್ಲರೂ  ಅವರವರ  ಅನುಕೂಲಕ್ಕೆ ತಕ್ಕಂತೆ ಇದ್ದರೆ ಮಾತ್ರ 
ನಾವು ಅವರುಗಳ ದೃಷ್ಟಿಯಲ್ಲಿ  ಚೆನ್ನಾಗಿ ಕಾಣುತ್ತೇವೆ,
ಅದು ಸರಿ ಇರಲಿ ಅಥವಾ ತಪ್ಪು ಇರಲಿ.*
*ಆದರೆ*
*ಅದು ತಪ್ಪು ಎಂದು ಪ್ರಶ್ನಿಸಿದರೆ ಸಾಕು,
ನಾವು ಎಷ್ಟೇ ಒಳ್ಳಯವರಾಗಿದ್ದರೂ 
ನಮ್ಮ  ಮೇಲೆ  ಅರೋಪಗಳ  ಸುರಿಮಳೆ ಇರುತ್ತದೆ*         
 
*ಚಿರತೆ ವೇಗಕ್ಕೂ,* *ಹುಲಿಯ ನೋಟಕ್ಕೂ*
*ಹೆದರದವ ಕೆಲವೊಮ್ಮೆ*
*ಬೆಕ್ಕಿನ ಅಡ್ಡಲಾಗುವಿಕೆಗೆ ಹೆದರುತ್ತಾನೆ!*
*ನೀ ನಂಬಿದಂತೆ ಜೀವನ ಅಷ್ಟೇ!”
 
 *ಶುಭನುಡಿ*
*ದೀಪ ಬೆಳಕು ಕೊಡುತ್ತೆ ಅನ್ನುವ ಕಾರಣಕ್ಕೆ  ಮಾತ್ರ ನಾವು ಹೊಗಳುತ್ತೇವೆ..
ಆದರೆ ಆ ಬೆಳಕಿಗೋಸ್ಕರ ಮೈಸುಟ್ಟುಕೊಂಡ ಬತ್ತಿ ಯಾರಿಗೂ ಕಾಣಿಸಲಿಲ್ಲ..
*ಆ ಬೆಳಕಿಗೋಸ್ಕರ ಅಸ್ತಿತ್ವವನ್ನೇ ಕಳೆದುಕೊಂಡ ಎಣ್ಣೆ ಯಾರಿಗೂ ಕಾಣಿಸಲಿಲ್ಲ..
*ಆ ಬೆಳಕಿಗೋಸ್ಕರ ಆಶ್ರಯ ಕೊಟ್ಟ ಹಣತೆ ಯಾರಿಗೂ ಕಾಣಿಸಲಿಲ್ಲ…
ದೀಪಕ್ಕೆ ಬೆಳಕು ಕೊಟ್ಟ ಬೆಂಕಿ ಯಾರಿಗೂ ಕಾಣಿಸಲಿಲ್ಲ..
*ಹಾಗೆಯೇ ಜೀವನ, ಕೆಲವು ಸಲ  ನಮ್ಮ ಶ್ರಮ
ಇನ್ನೊಬ್ಬರ ಖ್ಯಾತಿಗೆ ಕಾರಣವಾಗುತ್ತದೆ.*
 
ಬದುಕಿದ್ದಾಗ ಸರಿಯಾಗಿ ಊಟ ಹಾಕಲಿಲ್ಲ
ಸತ್ತ ಮೇಲೆ ತಿಥಿಯೆಂದು ಭೂರಿ ಭೋಜನ ಬಡಿಸಿದರು
ಉಷಾರಿಲ್ಲದೇ ಇದ್ದಾಗ ಸ್ನಾನ ಮಾಡಿಸಲಿಲ್ಲ
ಹೆಣವನ್ನು ಸುಗಂಧ ದ್ರವ್ಯಗಳಿಂದ ಸ್ನಾನ ಮಾಡಿಸಿದರು
ಬದುಕಿದ್ದಾಗ ತೊಡಲು ಒಳ್ಳೆಯ ಬಟ್ಟೆ ಕೊಡಲಿಲ್ಲ
ಸತ್ತ ಹೆಣಕ್ಕೆ ದುಬಾರಿ ಹೊಸ ಬಟ್ಟೆ ತೊಡಿಸಿದರು
ಕಷ್ಟದಲ್ಲಿದ್ದಾಗ ನೋಡಿ ನಕ್ಕರು
ಸತ್ತಾಗ ನೋಡಿ ಅತ್ತರು
ಇದ್ದಾಗ ಗೌರವ ಕೊಡಲಿಲ್ಲ
ಸತ್ತಾಗ ಹೆಣಕ್ಕೆ ಭಕ್ತಿಭಾವದಿ ನಮಸ್ಕರಿಸಿದರು
ಇದ್ದಾಗ ತಿರಸ್ಕಾರ
ಇಲ್ಲದೇ ಇದ್ದಾಗ ಪುರಸ್ಕಾರ
ಇದುವೇ ನಮ್ಮ ಸಮಾಜ…
 
ಕಟ್ಟಿಗೆ ಸುಟ್ಟಾಗ ಬೂದಿಯಾಗುತ್ತದೆ
ಆದರೆ ಇಟ್ಟಿಗೆ ಸುಟ್ಟಾಗ ಗಟ್ಟಿಯಾಗುತ್ತದೆ..
ಆದ್ದರಿಂದ ನಾವು ಕಷ್ಟಗಳನ್ನು ಎದುರಿಸಿ ಮುನ್ನುಗಿದಾಗ ಮಾತ್ರ
ಜೀವನದಲ್ಲಿ ಸುಟ್ಟ ಇಟ್ಟಿಗೆಯಂತೆ ಗಟ್ಟಿಯಾಗುತ್ತೇವೆ
 
ನಾವು ಬೇರೆಯವರ ದೃಷ್ಟಿಯಲ್ಲಿ ಕೆಟ್ಟವರಾಗಲು ಅವರಿಗೆ ಕೆಡಕು ಮಾಡಬೇಕೆಂದಿಲ್ಲ.
ಅವರು ಮಾಡುವ ತಪ್ಪುಗಳನ್ನು ಹೇಳಿದರೂ ಸಾಕು, ಕೆಟ್ಟವರಾಗುತ್ತೇವೆ.
 
ಮಗನ ಯೋಗ್ಯತೆ ಅವನ ಮದುವೆಯನಂತರ,
ಮಗಳ ಯೋಗ್ಯತೆ ಅವಳ ಹರೆಯದ ವಯಸ್ಸಿನಲ್ಲಿ,
ಪತಿಯ ಯೋಗ್ಯತೆ ಹೆಂಡತಿಯ ಅನಾರೋಗ್ಯಾವಸ್ಥೆಯಲ್ಲಿ,
ಪತ್ನಿಯ ಯೋಗ್ಯತೆ ಗಂಡನ ಬಡತನಾವಸ್ಥೆಯಲ್ಲಿ,
ಗೆಳೆಯನ ಯೋಗ್ಯತೆ ಆಪತ್ತುಕಾಲದಲ್ಲಿ,
ಸೋದರನ ಯೋಗ್ಯತೆ ಜಗಳದ ಪ್ರಸಂಗದಲಿ,
ಮಕ್ಕಳ  ಯೋಗ್ಯತೆ ನಮ್ಮ ವೃದ್ಧಾಪ್ಯದಲ್ಲಿ ತಿಳಿಯುವುದು.
 
*”ರಸ್ತೆಯಲ್ಲಿ ಮುಳ್ಳು ಬಿದ್ದಿದ್ದರೆ ಬದಿಯಲ್ಲಿ ಹೋಗುವುದು ಬುದ್ಧಿವಂತಿಕೆ……*
*”ಮುಳ್ಳನ್ನು ಬದಿಗೆ ಸರಿಸಿ ಹೋಗೋದು*
*ಹೃದಯವಂತಿಕೆ*
*ತಾನು ಬೆಳೆಯಬೇಕೆನ್ನುವ ಕನಸಿರಬೇಕು…..*
*ಇನ್ನೊಬ್ಬರನ್ನು ಬೆಳೆಸಬೇಕೆನ್ನುವ ಮನಸಿರಬೇಕು…..*
 
 *”ನಾವು ನೀರಿನಂತೆ ಬದುಕಬೇಕು,
ನೀರು ಹರಿಯುವ ದಾರಿಯಲ್ಲಿ ಕಲ್ಲು ಸಿಕ್ಕರೆ ನೀರು ಕಲ್ಲನ್ನು ಮುಳುಗಿಸಿ ಮುಂದೆ ಹೋಗುತ್ತದ.
ಹಾಗೇಯೆ ಜೀವನದಲ್ಲಿ ನಾವು ಕಷ್ಟಗಳನ್ನು ಎದುರಿಸಿ ಮುನ್ನುಗ್ಗುತ್ತಿರಬೇಕು…
*ಒಂದು ನಿಮಿಷದಲ್ಲಿ ಬದುಕು ಬದಲಾಗುತ್ತೆ ಅಂತ ಹೇಳೋಕಾಗಲ್ಲ,
ಆದರೆ ಒಂದು ನಿಮಿಷದಲ್ಲಿ ತೆಗೆದುಕೊಂಡ ನಿರ್ಧಾರ
ನಮ್ಮ ಬದುಕನ್ನು ಬದಲಾಯಿಸುತ್ತೆ*…… *ಜೀವನವೇ ವಿಚಿತ್ರ. 
 
ಎರಡು ವಸ್ತುಗಳನ್ನು ಮಾತ್ರ ಎಂದಿಗೂ ವ್ಯರ್ಥ ಮಾಡಬೇಡಿ.
ಅನ್ನದ ‘ಕಣ’ ಗಳನ್ನು 
ಹಾಗೂ
ಆನಂದದ ‘ಕ್ಷಣ’ ಗಳನ್ನು.
ಕೆಲವೊಮ್ಮೆ ನಿಮಗಾಗಿ 
ಕೆಲವೊಮ್ಮೆ ನಿಮ್ಮವರಿಗಾಗಿ
ಯಾವಾಗಲೂ ನಸುನಗುತ್ತಿರಿ.  
 
*ನಿಮ್ಮ ನಿರ್ಧಾರಗಳು ಸಣ್ಣದಿರಬಹುದು.
ಆದರೆ, ಕೆಲವೊಮ್ಮೆ ಅವುಗಳು ಬದುಕಿನಲ್ಲಿ ಬೀರುವ ಪರಿಣಾಮ ದೊಡ್ಡದು.*
 
ಯೋಗ್ಯತೆ ಕೈಗೊಳ್ಳುವ ಕಾಯಕದಲ್ಲಿರಬೇಕೇ ಹೊರತು ಆಡಿಕೊಳ್ಳುವ ಮಾತಿನಲ್ಲಲ್ಲ.
ಊಳಿಡುವುದು ನರಿಗಳೇ ಹೊರತು ಹುಲಿ-ಸಿಂಹಗಳಲ್ಲ. 
ಜನ ಹೇಗಿದ್ದರೂ ಆಡಿಕೊಳ್ಳುವರು ಅವರಲ್ಲಿ ನಾವೂ ಒಬ್ಬರಾಗದಿರಲು ಪ್ರಯತ್ನಿಸೋಣ. 
ಜನ್ಮಿಸಿದ್ದಕ್ಕೆ ಸಾರ್ಥಕವಾಗುವುದು.
 
*ಮರದಿಂದ ಕೆಳ ಬಿದ್ದ ಹೂ ಮತ್ತೆ ಅರಳುವುದಿಲ್ಲ……*
*ಆದರೆ, ಬೇರುಗಳು ಗಟ್ಟಿಯಾಗಿದ್ದರೆ ಮತ್ತೆ ಹೊಸ ಹೂಗಳು ಹುಟ್ಟುತ್ತವೆ…..*
*ಹಾಗೆಯೇ ನಮ್ಮ ಜೀವನದಲ್ಲಿ ಈವರೆಗೆ ಏನನ್ನು ಕಳೆದುಕೊಂಡಿದ್ದೇವೆ ಎಂಬುವುದಕ್ಕಿಂತ,
ಇನ್ನೂ ಜೀವನದಲ್ಲಿ ಮುಂದೆ ಎಷ್ಟೊಂದು ಬೆಳೆಯಬೇಕಿದೆ,
ಗುರಿ ಮುಟ್ಟ ಬೇಕಿದೆ ಎಂಬುದು ಮುಖ್ಯ……*
 
…ಯಾರು ನಮ್ಮ ಶ್ರಮವನ್ನು ಗಮನಿಸುವುದಿಲ್ಲ…
…ಯಾರು ನಮ್ಮ ನ್ಯಾಯವನ್ನು ಗಮನಿಸುವುದಿಲ್ಲ…
…ಯಾರು ನಮ್ಮ ನೋವನ್ನು ಗಮನಿಸುವುದಿಲ್ಲ…
                  *ಆದರೆ*
“ಎಲ್ಲರೂ ನಾವು ಮಾಡುವ ತಪ್ಪನ್ನು ಗಮನಿಸುತ್ತಾರೆ
                  *ಎಚ್ಚರ*
“ಗೆದ್ದರೆ ಕಾಲು ಹಿಡಿಯುತ್ತಾರೆ, ಬಿದ್ದರೆ ಕಾಲು ಎಳೆಯುತ್ತಾರೆ”
 
“ಸೋತವನನ್ನು ನೋಡಿ ಏಕೆ ನಗುವಿರಿ,
ಸೋಲು ಅವನ ತಪ್ಪಲ್ಲ..
ಸಮಯ ಸಂದರ್ಭ ಅವನ ಜೀವನದಲ್ಲಿ ಸೋಲುವಂತೆ ಮಾಡುತ್ತದೆ.
ಸೋತವನನ್ನು ನೋಡಿ ನಗುವುದಕ್ಕಿಂತ
ಸೋತವರನ್ನು ಸಂತೈಸಿ.
ಗೆದ್ದವರನ್ನು ಹೊಗಳಿರಿ..
ಆದರೆ ಸೋತವರನ್ನು ಹೆಚ್ಚಿನ ಸಮಾಧಾನ ಮಾಡಿ.
 
ಸಂಬಂಧ ಎನ್ನುವುದು ಬಡವ ಬಲ್ಲಿದ ಲೆಕ್ಕಾಚಾರದ ಮೇಲಿರಬಾರದು.
ಕುಡಿಯಲು ಯೋಗ್ಯವಿಲ್ಲದ ನೀರು ಕೂಡ ಬೆಂಕಿಯನ್ನು ನಂದಿಸುತ್ತದೆ.”
ನಿರ್ಮಲ ಪ್ರೀತಿಯಿಂದ ಎಲ್ಲರನ್ನೂ ಗೆಲ್ಲಬಹುದು.
ಪ್ರೀತಿ ವ್ಯಕ್ತಿ- ವ್ಯಕ್ತಿಯ ನಡುವೆ ಬಾಂಧವ್ಯವನ್ನು ಬೆಸೆಯುತ್ತದೆ.
 
ಕತ್ತಲು  ಅಂದರೆ ಅಂಧಕಾರವಲ್ಲ ಅದು ಬೆಳಕಿನ ಮೌನ.
ಸೋಲು ಅಂದರೆ ಅಂತ್ಯವಲ್ಲ ಅದು ಗೆಲುವಿಗೆ ಬೇಕಾದ ಸಾಧನ
ಕನಸು ಅಂದರೆ  ಬರೀ ಹಂಬಲವಲ್ಲ ಮನಸು ಎಂಬ ಕಾದಂಬರಿಗೆ ಬರೆದ ಮುನ್ನುಡಿ.
 
*ಅನ್ಯಾಯ ಮತ್ತು ಪಾಪದ ದುಡ್ಡಿನಲ್ಲಿ ವೈಬೋಗದ ಜೀವನ ನಡೆಸುವುದು
ಹುಲಿಯ ಮೇಲೆ ಕುಳಿತು ಸವಾರಿ ಮಾಡಿದಂತೆ.
ನೋಡುವವರು ಭಯ ಪಡುವುದು ಕೇವಲ ಆತ ಕುಳಿತಿರುವ ಹುಲಿಯನ್ನು ನೋಡಿ.
ಜೀವನದ ಯಾವುದೇ ಕ್ಷಣದಲ್ಲಿ ಹುಲಿಯ ಮೇಲಿನಿಂದ ಕೆಳಗೆ ಇಳಿದರೆ
ಸ್ವತಃ ಆ ಹುಲಿ ಆತನನ್ನು ತಿಂದು ಹಾಕುತ್ತದೆ.
ಯಾಕೆಂದರೆ ಜೀವನ ಎಂಬ ಪಯಣದಲ್ಲಿ ಮಾಡಿದ ಪಾಪಗಳು
ನಮ್ಮ ಜೊತೆಗೆ ಪಯಣಿಸುತ್ತಿರುತ್ತದೆ.
ನಮ್ಮನ್ನು ನುಂಗಲು ಸೂಕ್ತ ಸಮಯಕ್ಕಾಗಿ ಕಾಯುತ್ತಿರುತ್ತದೆ.
ಮಾಡಿದ ಒಳ್ಳೆಯ ಕೆಲಸಗಳು ಶ್ರೀರಕ್ಷೆಯಾಗಿ
ಸದಾ ನಮ್ಮನ್ನು ಕಾಯುತ್ತಿರುತ್ತದೆ.*
 
*ಜೇಬು ಖಾಲಿಯಾದಾಗ,
ಎದುರಾಗುವ ಒಂದೊಂದು ತಿರುವು ಕೂಡಾ
ಒಂದೊಂದು ಪಾಠವನ್ನು ಹೇಳಿಕೊಡುತ್ತದೆ.*
*ಆದರೆ*
*ಜೇಬು ತುಂಬಿದಾಗ
ಎದುರಾಗುವ  ಪ್ರತಿಯೊಂದು ತಿರುವು ಕೂಡಾ
ನಮ್ಮನ್ನು ದಾರಿ ತಪ್ಪುವಂತೆ ಮಾಡುತ್ತದೆ.*
 
*ಬದುಕಲ್ಲಿ ಭರವಸೆ ಇದ್ದರೆ
ಭವ್ಯ ಭವಿಷ್ಯವನ್ನು ರೂಪಿಸುವ ದಾರಿ ಅದಾಗೆ ಕಾಣಿಸುತ್ತೆ.*
*ಜೀವನದಲ್ಲಿ ಉತ್ಸಾಹವಿದ್ದರೆ
ಕನಸನ್ನು ನನಸಾಗಿಸುವ ಬಾಗಿಲು ತಾನಾಗೆ ತೆರೆಯುತ್ತೆ..*
 
ಕಾಲಿನ ಮೇಲೆ ಕಾಲು ಹಾಕಿ ಕೂರುವುದಲ್ಲ ದೊಡ್ಡಸ್ತಿಕೆ,
ತನ್ನ ಕಾಲ ಮೇಲೆ ನಿಂತು
ಬೇರೆಯವರ ಕೈ ಹಿಡಿದು
ಅವರಿಗೂ ನಿಲ್ಲಲು ಕಲಿಸುವುದು ನಿಜವಾದ ದೊಡ್ಡಸ್ತಿಕೆ..
 
*ಮನಸ್ಸಲ್ಲಿ ಇರೋ ಅಹಂಕಾರ
ಕಣ್ಣಿನಲ್ಲಿ ಬಿದ್ದು ಧೂಳಿನಂತೆ.
ಅದನ್ನು ಸ್ವಚ್ಛ ಗೊಳಿಸದಿದ್ದರೆ
ನಾವು ನೋಡುವ ಪ್ರತಿ ಒಂದು ವಸ್ತು ಕೂಡ
ಅಶುದ್ಧವಾಗಿ ಕಾಣಿಸುತ್ತದೆ…
 
*ಮನುಷ್ಯ ಎಷ್ಟೇ ಕೆಂಪಗಿದ್ದರೂ ಅವನ ನೆರಳು ಕಪ್ಪಗೆ ಇರುತ್ತದೆ.*
*ನಾನು ಶ್ರೇಷ್ಟ ಅನ್ನುವುದು ಆತ್ಮವಿಶ್ವಾಸ*
*ನಾನೇ ಶ್ರೇಷ್ಟ ಎನ್ನುವುದು ಅಹಂಕಾರ*
 
ತಾವರೆ ಕೆಸರಲ್ಲಿ ಹುಟ್ಟಿದರೂ ಭಕ್ತರು ದೇವರ ಪಾದಕ್ಕೆ*ಅರ್ಪಿಸುತ್ತಾರೆ,
ಪಾಪಾಸುಕಳ್ಳಿ ಹೂ ಬೆಟ್ಟದ ಮೇಲೆ ಸ್ವಚ್ಛ ಜಾಗದಲ್ಲಿ ಹುಟ್ಟಿದರೂ ಅದರ ಉಪಯೋಗವಿಲ್ಲ.
ಇದರ ಅರ್ಥ ಹುಟ್ಟು ಮುಖ್ಯವಲ್ಲ ನಮ್ಮ ಬದುಕುವ ರೀತಿ ಮುಖ್ಯ…….
 
*ಕಳೆದು ಕೊಂಡ ಜಾಗದಲ್ಲಿ ಹುಡಕಬೇಕು . 
ಸೋತ ಜಾಗದಲ್ಲೆ ಗೆಲ್ಲಬೇಕು.
ಅವಮಾನಿಸಿದ ಜಾಗದಲ್ಲೆ ಬೆಳೆಯಬೇಕು
ತಿರಸ್ಕರಿಸಿದವರಿಂದಲೇ ಪುರಸ್ಕರಿಸಿ ಕೊಳ್ಳಬೇಕು..

Join The Discussion