Quotes

Best Kannada Quotes About Life

Kannada Thoughts about Life

“ಜೀವನ ಜೀವನ ಏರು ಪೇರಿನ ಗಾಯನ “

Best Kannada Quotes

ಯಾರೋ ಕೊಟ್ಟ ನೋವನ್ನು
ಎರಡು ದಿನದಲ್ಲಿ ಮರೆಯಬಹುದು
ಆದರೆ….
ನಾವು ಯಾರನ್ನು
ಜೀವಕ್ಕಿಂತ ಹೆಚ್ಚಾಗಿ
ನೆನಪಿಸುತ್ತೇವೋ
ಅವರು ಕೊಟ್ಟ್ಟ ನೋವು
ಜೀವನ ಪೂರ್ತಿ ಮರೆಯೋಕೆ ಆಗಲ್ಲ.

ದಿನದ ಕೊನೆಯಲ್ಲಿ ಕುಳಿತು
ಸೋಲು ಗೆಲುವುಗಳ ಕುರಿತು
ಹಾಕುವ ಲೆಕ್ಕಾಚಾರವೇ
ನಾಳೆಯ ನಡೆಗೆ ಸ್ಪೂರ್ತಿ.
ನಾಳಿನ ಗೆಲುವು ಹೆಚ್ಚಿಸಿಕೊಳ್ಳೋಣ.

ನಾನು ಯಾವಾಗಲೂ  ಮಾಡುವ
ದೊಡ್ಡ ತಪ್ಪು ಯಾವುದಂದರೆ ?
ಎಲ್ಲರನ್ನು ನಮ್ಮವರೆಂದು
ತಿಳಿದು ಮೋಸ ಹೋಗುವುದು …..

ಒಂದು ಹೃದಯವನ್ನು
ಮರೆಯೋದರಿಂದ ನಿಮಗೆ
ಒಳ್ಳೇದಾಗುತ್ತದೆ ಅನ್ನುವುದಾದರೆ
ಮರೆತು ಬಿಡಿ. ಚಿಂತಿಸಬೇಡಿ
ಆದರೆ….
ಆ ಹೃದಯ ನಿಮ್ಮನ್ನೇ
ಮರೆಯುತ್ತಾರೆ ಅಂತ ಮಾತ್ರ
ಅಂದುಕೊಳ್ಳಬೇಡಿ…..
ನೆನಪಿರಲಿ………

ಪ್ರತಿ ದಿನವೂ ನಮಗೆ ಉತ್ತಮ ದಿನ ಆಗಲು ಸಾಧ್ಯವಿಲ್ಲ.
ಆದರೆ ಪ್ರತಿ ದಿನದಲ್ಲಿಯೂ ಒಂದಲ್ಲ  ಒಂದು
ಉತ್ತಮ ಅಂಶ ಇದ್ದೆ ಇರುತ್ತದೆ.
ಹಾಗಾಗಿ ಆಯಾ ದಿನಗಳ್ಳನ್ನು ಉತ್ತಮ ದಿನಗಳನ್ನಾಗಿಸುವುದು
ನಮ್ಮ ಕೈಯ್ಯಲ್ಲಿದೆ.

ಸಿಗದವರನ್ನು ಹುಡುಕಬಾರದು,
ಸಿಕ್ಕವರನ್ನು ಬಿಡಬಾರದು,
ಬಾರದವರಿಗೆ ಕಾಯಬಾರದು,
ಬಂದವರನ್ನು ಕಳುಹಿಸಬಾರದು,
ಕೊಡದವರಲ್ಲಿ ಕೇಳಬಾರದು,
ಕೊಟ್ಟವರನ್ನು ಮರೆಯಬಾರದು.

ಅತಿಯಾದ ನಂಬಿಕೆ ಒಳ್ಳೆಯದಲ್ಲ.
ಅತಿಯಾದ ಪ್ರೀತಿಯೂ ಸರಿಯಲ್ಲ.
ಅತೀ ಬರವಸೆಯಂತೂ ಬೇಡವೇ ಬೇಡ.
ಏಕೆಂದರೆ ಅತಿ ಎನ್ನುವುದೇ ಅತಿಯಾಗಿ ನೋಯಿಸುತ್ತದೆ.

ದಿನದ ಕೊನೆಯಲ್ಲಿ ಕುಳಿತು
ಸೋಲು ಗೆಲುವುಗಳ ಕುರಿತು
ಹಾಕುವ ಲೆಕ್ಕಾಚಾರವೇ
ನಾಳೆಯ ನಡೆಗೆ ಸ್ಪೂರ್ತಿ.
ನಾಳಿನ ಗೆಲುವು ಹೆಚ್ಚಿಸಿಕೊಳ್ಳೋಣ.

ಗಾಳಿ, ಬೆಳಕುಗಳು ನಮ್ಮ ಹತೋಟಿಯಲ್ಲಿ ಇಲ್ಲ ನಿಜ.ಆದರೆ ನಮ್ಮ ಅನುಕೂಲಕೆ ತಕ್ಕಂತೆ ಅವುಗಳನ್ನುಪರಿವರ್ತಿಸಿಕೊಳ್ಳುವ ಜಾಣ್ಮೆ ಇದೆಯಲ್ಲ, ಬಳಸಿಕೊಳ್ಳೋಣ.

Join The Discussion