Quotes

Kannada Quotes – Swamy Vivekananda Thoughts

Good Thoughts in Kannada

ಶ್ರೀ ಸ್ವಾಮಿ ವಿವೇಕಾನಂದ – Quotes

 

ಏಳಿ, ಎದ್ದೇಳಿ
ಮತ್ತು ಗುರಿ ತಲುಪುವವರೆಗೆ ನಿಲ್ಲದಿರಿ.

ಮನಸ್ಸಿನಂತೆ ಮಹಾದೇವ. ಅಂದರೆ ಯಾವುದೇ ವಿಚಾರ ಮನಸ್ಸಿಗೆ ಗಾಢವಾಗಿ ತಾಕಿದಾಗ ಅದು ಮನಸ್ಸನ್ನು ಆವರಿಸಿಬಿಡುತ್ತದೆ. ಆಗಲೇ ವಾಸ್ತವಿಕ, ಭೌತಿಕ ಮತ್ತು ಮಾನಸಿಕ ಪರಿವರ್ತನೆ ಕಂಡುಬರುವುದು.

ಅನುಭವವು ಜಗತ್ತಿನ ಸರ್ವಶ್ರೇಷ್ಠ ಶಿಕ್ಷಕ. ಉಸಿರಾಡುವವರೆಗೂ ಕಲಿ, ಜ್ಞಾನಾರ್ಜನೆಯೇ ಜೀವನದ ಗುರಿಯಾಗಿರಲಿ.
ಜ್ಞಾನ ನಮ್ಮ ಮಧ್ಯೆ ಇರುವಂತಹುದೇ, ಆದರೆ ಮನುಷ್ಯ ಅದನ್ನು ಆವಿಷ್ಕರಿಸಿ ಅನಾವರಣಗೊಳಿಸುವ ಮಹಾತ್ಕಾರ್ಯದಲ್ಲಿ ತೊಡಗಬೇಕು.
ಇಡೀ ವಿಶ್ವವೇ ಒಂದು ಅದ್ಭುತ ವ್ಯಾಯಾಮ ಶಾಲೆ. ಇಲ್ಲಿ ನಮ್ಮನ್ನು ನಾವೇ ಹಿಡಿದು ಸದೃಢಗೊಳಿಸಿಕೊಳ್ಳಬೇಕು.
ಶ್ರದ್ದೆ, ಸಹನೆ, ಸತತ ಪ್ರಯತ್ನ, ಜಯ ಸಾಧಿಸಲು ಬೇಕಾದ ಮೂರು ಅಗತ್ಯ ಸಾಧನಗಳು. ಇದರ ಜೊತೆಗೆ ಆತ್ಮ ವಿಶ್ವಾಸ ಇದ್ದರೆ ಮಾತ್ರವೇ ವಿಜಯಲಕ್ಷ್ಮಿ ಒಲಿಯುತ್ತಾಳೆ.
ದುಡ್ಡು ನಿಮ್ಮ ಕೈ ಸೇರುತ್ತದೋ ಇಲ್ಲವೋ, ಅದಲ್ಲ ಜೀವನದ ಧ್ಯೇಯ. ನಿಮ್ಮ ಸಾವು ಈಗಲೇ ಆಗಬಹುದು ಅಥವಾ ಇನ್ಯಾವಾಗಲೂ.. ಆದರೆ ಭ್ರಷ್ಟ ಹಾದಿ ಹಿಡಿಯದೇ ನ್ಯಾಯದಾರಿಯಲ್ಲಿ ಸಾಗುವುದು ನಿಮ್ಮ ಗುರಿಯಾಗಿರಲಿ.

Join The Discussion